Pages

Subscribe:

Ads 468x60px

Tuesday, June 17, 2008

ಸತ್ತು ಘೋರಿಯಾಗಿದ್ದೇನೆ


ಪ್ರೀತಿಯಿಲ್ಲದ ನನ್ನ ಬಾಳು,
ಚಂದಿರನಿಲ್ಲದ ಬೋಳು ಬಾನು.
ಬರೀ ಕಾಮೋ೯ಡದ ನೆರಳು.
ಆಗಾಗ ಗುಡುಗು, ಸಿಡಿಲು. ಮೊದಲೆಲ್ಲಾ
ಹನಿ ಹನಿಯಾಗಿ ತೊಟ್ಟಿಕ್ಕುತ್ತಿದ್ದ ಮಳೆ
ಈಗ ಭೀಕರ ಪ್ರವಾಹ.


ಹಿಂದೊಮ್ಮೆ ಆ ಚಂದಿರ ಕೇವಲ
ನನಗಾಗಿಯೇ ಬರುತ್ತಿದ್ದ.
ಶುಭ್ರ ಮೇಘವಾಗಿ ಬಿಚ್ಚು ಮನದಿಂದ
ತಬ್ಬುತ್ತಿದ್ದೆ. ಮುತ್ತಿಕ್ಕುತ್ತಿದ್ದೆ. ಆತನ
ಸಾಮ್ರಾಜ್ಯದಲ್ಲಿ ಸಾವಿರ ಚುಕ್ಕಿಯ
ರಂಗೋಲಿ ಬರೆಯುತ್ತಿದ್ದೆ.


ಈಗ ಆತನಿಗೆ ನನ್ನ ಮೇಲೆ ಮುನಿಸಂತೆ !
ಇರುಳ ತಂಪಲ್ಲೂ ನನ್ನೆದೆ ಧಗೆಯ ಉರಿ.
ಒಡಲಲ್ಲಿ ಚಿಗುರಿದ ಪ್ರೀತಿಯ ಕೂಸಿಗೆ
ಎಲ್ಲೋ ಗಭ೯ಪಾತವಾದಂತೆ.
ಮತ್ತೆ ಚಿಗುರಬಯಸಿದ ತಪ್ಪಿಗೆ
ಶಾಶ್ವತ ಅಮಾವಾಸ್ಯೆಯ ಕರಿನೆರಳು.


ಕದ್ದು ಕದ್ದು ಬರುವೆ ಏಕೆ
ಮೋಡದ ಮರೆಯಲ್ಲಿ ?
ನೀ ಬರುವ ದಾರಿಯಲ್ಲಿ ಕಾದು ಕುಳಿತು,
ಸತ್ತು ಘೋರಿಯಾಗಿದ್ದೆನೆ.
ನಿನ್ನ ಮೋಸದ ಬೆಳದಿಂಗಳಿಗಿಂತ
ಘೋರಿಯೊಳಗಿನ ಸತ್ಯ ತಂಪಾಗಿದೆ.

6 comments:

prabha said...

my god, how u campose the words yaar. its owesome

Veena DhanuGowda said...

nice kavana :)

Unknown said...

tumba chennagide guru.....

vinu the great............... said...

ನಿನ್ನ ಮೋಸದ ಬೆಳದಿಂಗಳಿಗಿಂತ
ಘೋರಿಯೊಳಗಿನ ಸತ್ಯ ತಂಪಾಗಿದೆ.....Vin

vinu the great............... said...

ಪ್ರೀತಿ ನೈಜತೆ ಸ್ಪಷ್ಟವಾಗಿ ಕಾಣುತ್ತಿದೆ .........ಲವ್ ಮಾಡದೋರು ಕವಿ ಆಗ್ತಾರೆ ಅಂತಾ ಕೇಳಿದ್ದೆ ಆದ್ರೆಇಷ್ಟೊಳ್ಳೆ ಕವನಾನಾ ಬರಿತಾರೆ ಅಂತಾ ಇಗ ತಿಳೀತು ....ಹ್ಯಾಟ್ಸ್ ಆಪ್ ಗುರು

vinu the great............... said...

ಇ ಕವನಾ ಬಾಳ ಇಷ್ಟ ಆಯಿತು ನಂಗೆ ಗುರು