Pages

Subscribe:

Ads 468x60px

Wednesday, December 24, 2008

ನೀ ದೂರವಿದ್ದರೇನಂತೆ ?

ನೀ ದೂರವಿದ್ದರೇನಂತೆ,
ನಿನ್ನ ನೆನಪು ಹತ್ತಿರವಿದೆಯಲ್ಲ:
ನಿನ್ನ ನೆನಪಲ್ಲೇ ಅಪ್ಪಿ
ಮುದ್ದಾಡುವೆ, ಅವಳನ್ನ !

ಚುಟುಕು


ಬಾನ ನೀಲ ಪುಟದ ಮೇಲೆ
ನಕ್ಷತ್ರದಿಂ ಪ್ರೇಮ ಪತ್ರವ ಬರೆದಿಹೆ
ಬೆಳ್ಳಿ ಚಂದ್ರನ ದೀವಿಗೆ ಹೊತ್ತಿಸಿ
ನೋಡಬಾರದೆ....? ಓದಬಾರದೆ...?

Saturday, December 20, 2008

ನಿನ್ನ ಮಾಯೆ

ಬೇಡವೆಂದರೂ ಬಿಡದೀ ಮಾಯೆ
ಕಣ್ಣೊಳಗಣ ಕಸದಂತೆ ಇರಿಯುತಿದೆ
ಗಾಡಾಂಧಕಾರದಲಿ ಬೆಳಕೆಂಬ ಮಾಯೆ
ಸುಖ ನಿದ್ರೆಯಲಿ ಕನಸೆಂಬ ಮಾಯೆ.

ತನುವೊಳಗೆ ಬಿಸಿಯೇರಿಸಿ
ಚಳಿ, ಮಳೆಯೊಳು ತೇಲಿಸುವುದೀ ಮಾಯೆ
ಪ್ರೇಮದರಸಿಯ ಕಾಮದಾಸೆಗೆ ತಬ್ಬಲು
ಮುಳ್ಳಂದದಿ ಚುಚ್ಚುವುದೀ ಮಾಯೆ.

ಪ್ರೇಮ ಕುಸುಮದ ಸುಮದ ಮತ್ತಿಗೆ
ಚೇಳು ಕಡಿಸುವುದೀ ಮಾಯೆ
ಚುಂಬಿಸುವ ಕೆಂದುಟಿಗಳ ಮಧುವೊಳಗೆ
ವಿಷವ ಬೆರೆಸುವುದೀ ಮಾಯೆ.

ನಿನ್ನನೇ ನಂಬಿ ತನು ಮನವನಪಿ೯ಸಿ
ನೀ ಬರುವ ದಾರಿಯಲಿ ಹೂವಾಗಿ ಬಿದ್ದಿರಲು
ತುಳಿ, ತುಳಿದು ಭೂಗಭ೯ಕಂಟಿಸುತ
ಮರಣದುಂದುಬಿಯ ನುಡಿಸುವುದೀ ಮಾಯೆ.

Tuesday, June 17, 2008

ಸ್ಮಶಾನ ಸಾರಥಿ


ಸಾರಾಯಿ ನಶೆ, ನಿಶೆಯ ಮರೆಸುವ
ನೋವಿನೆದೆಯಲ್ಲೂ ಕೊಂಚ
ಸುಖವ ನೀಡುವ, ಗಾಯ ಮಾಯಿಸುವ
ಕಹಿ ಔಷಧಿಯಂತೆ !


ಕುಡಿದಾಗ ತಾನೇ ರಾಜ
ದಬಾ೯ರಿನಲ್ಲಿ ಯಾರಿಗೂ ಹೆದರುವವನಲ್ಲ
ರಸ್ತೆ ಬದಿಯ ಚರಂಡಿಗಳೇ
ತಮ್ಮ ಅರಮನೆಯ ಸುಪ್ಪತ್ತಿಗೆಗಳು


ಸಂವಾದಗಳಿಗೇನೂ ಕೊರತೆಯಿಲ್ಲ
ಸೂಜೀಮೊನೆಯ ಕಾರಣ ಸಾಕು
ತೊದಲು ಭಾಷೆಯ ವಾಗ್ಧಾಳಿಗೆ
ನ್ಯಾಯವಾದಿಗಳೂ ನಾಚಬೇಕು


ಮದಿರೆಯೇ ಮಡದಿ, ಸಂಗಾತಿ
ಸಂಗ ಅತಿ ದುಮ೯ರಣಕ್ಕೆ ನಾಂದಿ
ಸೇಂದಿಯೊಂದಿಗೆ ಬ್ರಾಂದಿಯೂ ನುಗ್ಗಿ
ಸ್ಮಶಾನ ಸಾರಥಿಗೆ ಸುಗ್ಗಿಯೋ ಸುಗ್ಗಿ


ಬೀದಿ ನಾಯಿಗಳು ಖಾಸಾ ದೋಸ್ತಿಗಳು
ದಿನವೂ ಇವರಿಗೆ ಕಂಪನಿ ಕೊಡುವವು
ಸಾರಾಯಿ ಸಾಮ್ರಾಟನ ಬಾಡಿಗಾಡು೯ಗಳು
ನಿತ್ಯ ಕಮ೯ವ ಪೂರೈಸುವವು


ಕುಡಿದಾಗ ಗೊತ್ತಿಲ್ಲ ನೀನ್ಯಾರೋ ನಾನ್ಯಾರೋ
ಏಕವಚನದ ಗೌರವ ಮರೆಯುವುದಿಲ್ಲ
ಕಣ್ಣಿಗೆ ಕಂಡದ್ದೂ ಕಾಣುವುದಿಲ್ಲ
ಮಾಯಾ ಜಿಂಕೆಯ ಬೆನ್ನಟ್ಟಿಹೆಯಲ್ಲ !

ನಿನ್ನಾ ಒಲವು

ನಿನ್ನಾ ಒಲವು; ಸುಡುವ ಬಿಸಿಲು,
ಬಸಿವಾ ಬೆವರ; ಕಣ್ಣ ಹನಿಗೆ ಬೆಸೆದ,
ಲೆಕ್ಕವಿರದ ರಕ್ತ ಬಿಂದು.
ಕೊರೆದ ಹೃದಯದಿ ಚೀರಿ ಚೆಲ್ಲಿದ;
ಕೆಂಪು ಕಣದಿ, ಬದುಕ ಬಯಸಿ
ಜೀವದುಸಿರ ಮಿಡಿವ ಪ್ರೀತಿ.

ಸತ್ತು ಘೋರಿಯಾಗಿದ್ದೇನೆ


ಪ್ರೀತಿಯಿಲ್ಲದ ನನ್ನ ಬಾಳು,
ಚಂದಿರನಿಲ್ಲದ ಬೋಳು ಬಾನು.
ಬರೀ ಕಾಮೋ೯ಡದ ನೆರಳು.
ಆಗಾಗ ಗುಡುಗು, ಸಿಡಿಲು. ಮೊದಲೆಲ್ಲಾ
ಹನಿ ಹನಿಯಾಗಿ ತೊಟ್ಟಿಕ್ಕುತ್ತಿದ್ದ ಮಳೆ
ಈಗ ಭೀಕರ ಪ್ರವಾಹ.


ಹಿಂದೊಮ್ಮೆ ಆ ಚಂದಿರ ಕೇವಲ
ನನಗಾಗಿಯೇ ಬರುತ್ತಿದ್ದ.
ಶುಭ್ರ ಮೇಘವಾಗಿ ಬಿಚ್ಚು ಮನದಿಂದ
ತಬ್ಬುತ್ತಿದ್ದೆ. ಮುತ್ತಿಕ್ಕುತ್ತಿದ್ದೆ. ಆತನ
ಸಾಮ್ರಾಜ್ಯದಲ್ಲಿ ಸಾವಿರ ಚುಕ್ಕಿಯ
ರಂಗೋಲಿ ಬರೆಯುತ್ತಿದ್ದೆ.


ಈಗ ಆತನಿಗೆ ನನ್ನ ಮೇಲೆ ಮುನಿಸಂತೆ !
ಇರುಳ ತಂಪಲ್ಲೂ ನನ್ನೆದೆ ಧಗೆಯ ಉರಿ.
ಒಡಲಲ್ಲಿ ಚಿಗುರಿದ ಪ್ರೀತಿಯ ಕೂಸಿಗೆ
ಎಲ್ಲೋ ಗಭ೯ಪಾತವಾದಂತೆ.
ಮತ್ತೆ ಚಿಗುರಬಯಸಿದ ತಪ್ಪಿಗೆ
ಶಾಶ್ವತ ಅಮಾವಾಸ್ಯೆಯ ಕರಿನೆರಳು.


ಕದ್ದು ಕದ್ದು ಬರುವೆ ಏಕೆ
ಮೋಡದ ಮರೆಯಲ್ಲಿ ?
ನೀ ಬರುವ ದಾರಿಯಲ್ಲಿ ಕಾದು ಕುಳಿತು,
ಸತ್ತು ಘೋರಿಯಾಗಿದ್ದೆನೆ.
ನಿನ್ನ ಮೋಸದ ಬೆಳದಿಂಗಳಿಗಿಂತ
ಘೋರಿಯೊಳಗಿನ ಸತ್ಯ ತಂಪಾಗಿದೆ.

ಹಿತವರು ಯಾರು....?

ಭಾವನೆಗಳಿಲ್ಲದ ಬದುಕು
ಭವದೊಳು ಸಾಗುತಿಹುದು,
ನೋಟ ಬೀರಿದಲ್ಲೆಲ್ಲಾ
ವಿಷಮಯ ಆಪತ್ತು ಕಾದಿಹುದು.

ಅಹಿಂಸೆ ಬೇಡಿದ ಜೀವ
ಹಿಂಸೆಗೆ ಬಲಿಯಾಗಿದೆ.
ಗಧ್ಗದಿತ ಕಂಠವಿಂದು
ಆಸರೆಯ ಬೇಡಿದೆ.

ಭೂಮಿಯ ಒರತೆಯು ಬತ್ತಿ,
ಬಾಯಾರಿ, ಬಿಸಿನೆತ್ತರ ಕುಡಿಯುತ್ತಿದೆ.
ದೈವ ನೀಡಿದ ಬದುಕು
ವ್ಯಥ೯ವಾಗಿ ಸಾಗುತ್ತಿದೆ.

ಎಲ್ಲರೊಳೂ "ತಾನು"
ಮನೆಮಾಡಿ, ಮಸಿಬಳಿದು
ಪರಚಿಂತೆಗೆಡೆಗೊಡದೆ
ಅಹಂಕಾರದಿ ಮೆರೆದಿಹುದು.

ಹಿತವರು ಯಾರು ?
ಸುತ್ತಲಿರುವವರೊಳು
ತನ್ನನ್ನೆ ತಾನು ನಂಬದ
ಅಪರಿಚಿತ ಜಗದೊಳು.

ಬೆನ್ನ ಹಿಂದಣ ನೆರಳಂತೆ
ಹಿಂಬಾಲಿಸಿದ ಈ ಕಮ೯,
ನೆಮ್ಮದಿಯ ಗುಡಿಸಲಿಗೂ ಬಿಡದು
ಬಾಧಿಸುವ ಧಮ೯.

ನನ್ನವಳು


ಬಾಳಿಗಪ್ಪಿದ ಮುತ್ತಿನೊಡವೆಯೆ
ಎನ್ನ ಕನಸಿನ ಚಂದನ,
ನನ್ನ ಬದುಕಿನ ವೀಣೆ ಮಿಡಿಯುವ
ಸ್ವರದ ಸುಮದುರ ಸ್ಪಂದನ.


ಕಲ್ಲಿನಂಚಲಿ ಅಲೆಯ ಮುತ್ತಿಗೆ
ಕವಲನೊಡೆಯುವ ಚೇತನ.
ಕನಸಿನಂಗಳದಿ ಮಿಂಚಿ ಮರೆಯುವ
ಸುಪ್ತ ಮನಸಿನ ಭಾವನ.


ನೀಲಿ ಕಂಗಳ ಸೂಕ್ಷ್ಮ ನೋಟವೆ
ನಿನ್ನ ಹೃದಯದ ಮಿಡಿತವು.
ಹೇಳಲಾಗದ ಮೌನ ತರಂಗದಿ
ಪ್ರೀತಿ ಚಿಲುಮೆಯ ಸಾಗರವು.


ಮತ್ತೆ ಮುತ್ತುವ ಗಾಳಿ ತಂಪಲಿ
ಹಿತವು ನಿನ್ನಯ ಸ್ಪಷ೯ವು.
ನೋವಿನಂಚಲೂ ಸುಖವ ನೀಡುವ
ಸಾಲು ಸಾಲು ನೆನಪುಗಳು.


ದಾಹ ನೀಗುವ ಅಮೃತ ಬಿಂದು
ಹೊಳೆವ ತುಟಿಯ ಅಂಚಲಿ.
ಪ್ರಾಣ ಸಾಗುವ ಮುನ್ನ ಪ್ರೀತಿಯ
ಚಿಗುರು ಮೊಳೆಯದೆ ಹೃದಯದಿ ?

Monday, June 16, 2008

ಕಣ್ಣ ಹನಿ ಅದಾವ ಲೆಕ್ಕ...?

ಸಂಬಂಧಗಳ ಸುಳಿಯಲ್ಲಿ
ಸಿಕ್ಕಿಬಿದ್ದ ನಾವೆ ನಾನು
ಸೆಳೆವುದೆನ್ನ ಅದಾವ ಕಡೆಗೋ ?
ನಾ ಕಾಣೆ, ತೀರವಾದರೋ
ಕರುಣೆ ಬಾರದೆ ದೂರವೇ ನಿಂತಿದೆ,
ಸುಳಿಗದೆಂಥ ಕೋಪ ಎನ್ನ ಮೇಲೆ
ಆಬ್ಬಾ ಅದರ ಮೃತ್ಯು ಆಲಿಂಗನವೇ !
ಆ ಭೀಕರ ಕಡಲ ಮುಂದೆ
ನನ್ನ ಕಣ್ಣ ಹನಿ ಅದಾವ ಲೆಕ್ಕ ?

ಆ (ಹಂ) ಗೆಳತಿ


ಪ್ರೀತಿಯ ಗೆಳತಿಯೇ ನಿನ್ನ
ಸಾಧನೆಯ ಮೆಚ್ಚಿ ಅಭಿನಂದಿಸಲು
ತವಕದಿ ಬಳಿಬರಲು ನಿನ್ನ ವತ೯ನೆಯ
ನಿಜ ರೂಪ ತಿಳಿದು ನಾ ಖಿನ್ನನಾದೆ

ಸಾಧನೆಯ ಇನ್ನೊಂದು ಮುಖವೇ
ಅಹಂಕಾರವೆಂಬುದ ನಿರೂಪಿಸಿದೆ
ಇರಬಾರದು ಗೆಳತಿ ಎಂದಿಗೂ
ದ್ವಿಮುಖ ಭಾವನೆಯ ಬುದ್ದಿ

ನಿನ್ನ ಈ ಸಾಧನೆಯ ಕಿರೀಟಕ್ಕೆ
ಅಹಂಕಾರವೆಂಬುದು ಕಳಂಕದ ಗರಿ
ಮೋಸಗಾತಿಯ ಮಂದಹಾಸದ
ಕಿರು ನಗೆಗೆ ನಾ ಮೋಸಹೋದೆ
ಎಲ್ಲರಂತಲ್ಲ ನನ್ನ ಗೆಳತಿ ಎಂಬ
ನಂಬಿಕೆಗೆ ನೀ ದ್ರೋಹಿಯಾದೆ


ನಿನ್ನ ಸಾಧನೆಗೆ ಅಭಿನಂದಿಸಲೇ ? ಅಥವಾ
ನಿಜರೂಪದ ಅರಿವು ಮೂಡಿಸಿದ ನಿನಗೆ
ಧನ್ಯತೆಯನ್ನು ತಿಳಿಸಲೇ ?
ಆದರೂ ಗೆಳತಿ ಹಾರೈಸುವೆ
ಸಾಧನೆಯ ಹಾದಿಯಲ್ಲಿ ಅಹಂ-ಭಾವವು
ಮರೆಯಾಗಿ ಎಂದಾದರೊಮ್ಮೆ
ನನ್ನ ನಂಬಿಕೆಗೆ ನಿನ್ನ ನಂಬಿಕೆಯು ಜೊತೆಯಾಗಲಿ
ಗೆಳೆತನದ ಬಂಧನವಾಗಲಿ

ವಾಸ್ತವ

ಜಗದ ನೂರಾರು ತೊಳಲಾಟಗಳ ನಡುವೆ
ಸಂತೋಷದ ಕ್ಷಣವು ಅದೆಲ್ಲೋ ಮರೆಯಲ್ಲಿ
ಹುಡುಕಾಟದ ಕದನದಡಿಯಲ್ಲಿ
ದೊರೆತುದೆಲ್ಲವೂ ಶೂನ್ಯ ಫಲ

ತನಗಾಗಿ ಅರಸಿ ಹೊರಟ ಸ್ವಾಥಿ೯
ಸುಖಲೋಲುಪತೆಯ ತಂಪು ನೆರಳ ಆಡಿಯಲ್ಲಿ
ಕೊನೆಗೂ ದೊರೆಯಿತದೆಲ್ಲವ ಮೀರಿ
ಎಲುಬುಗೂಡುಗಳೊಂದಿಷ್ಟು ಹುಡಿ ಮಣ್ಣಿನಲ್ಲಿ

ಇದೇನಾ ಸ್ನೇಹ...?





ಪದಗಳಿಗೆ ನಿಲುಕದ ಭಾವನೆಗಳು

ಬಿಕ್ಕಿ ಬರುವ ಕಣ್ಣೀರ ಧಾರೆಯಲಿ

ಹುಡುಕುವ ನೂರಾರು ಅಥ೯ಗಳು

ನೋವಿಗೊಂದಿಷ್ಟು ಸಾಂತ್ವನ

ನಲಿವಿಗೊಂದಿಷ್ಟು ಸ್ಪಂದನ

ಬೊಗಸೆ ಪ್ರೀತಿಯಲ್ಲಿಯೇ ಅರಳಿಸುವ

ನೂರಾರು ಕನಸುಗಳ ಹಂದರ

ದುಗುಡದ ಮನಕೆ ಬೆಚ್ಚನೆಯ ಉಸಿರು

ಕೈ ಕೈ ಬೆಸೆದು ತೋರುವ ದಾರಿ

ನಿನ್ನಂತರಂಗದ ಭಾವ ನಾನೆ ಎನ್ನುವ ಪರಿ

ಇದೇನಾ ಸ್ನೇಹ....? ಇದೇನ ಸ್ನೇಹ.......?