Pages

Subscribe:

Ads 468x60px

Tuesday, July 27, 2010

ಬಿ. ಕೆ. ಎಸ್ ವರ್ಮ

Painting is poetry that is seen rather than felt, and poetry is painting that is felt rather than seen. Leonardo da Vinci

ಒಂದು ವರ್ಣಚಿತ್ರವನ್ನ ಪದಗಳಿಗೆ ನಿಲುಕದ ಕವನ ಎಂದು ಕರೆಯುತ್ತಾರೆ, ಹಾಗಾಗಿ ಈ ಕವನವನ್ನ ಅನುಭವಿಸಿ ಆನಂದಿಸುವುದಕ್ಕಿಂತ ನೋಡಿ ಆನಂದಿಸಬೇಕು ಎನ್ನುವ ಲಿಯನಾರ್ಡೋ ಡಾ ವಿನ್ಸಿ ಅವರ ಮಾತು ಬಹಳ ಆಪ್ಯಾಯಮಾನವಾದುದು ಅಲ್ಲದೆ ಬಣ್ಣಗಳ ಮೂಲಕ ಬದುಕಿನ ಹಲವು ಸ್ಥರಗಳನ್ನ ಬಿಂಬಿಸುವ ಈ ವರ್ಣಕಲೆ ಅಪೂರ್ವವಾದುದು ಕೂಡ. ಕಲಾವಿದರು ಜಗತ್ತಿನ ಅದ್ಭುತವಾದ ಸೃಷ್ಠಿ; ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಅಭೂತಪೂರ್ವ ಕಲೆಗಳ ರಚನಾಕರ್ತರು. ವರ್ಣಚಿತ್ರಕಲೆಯಲ್ಲಿ ತಮ್ಮ ಸಾಧನೆಯನ್ನು ಮೆರೆದ ಕಲಾವಿದರು ಅನೇಕರು, ಆದರೆ ಇತಿಹಾಸದಲ್ಲಿ ಎಲ್ಲರಿಗೂ ಮಿಗಿಲಾಗಿ, ಯಾರ ಸ್ಪರ್ಧೆಗೂ ನಿಲುಕದೆ ನಭ ನೀಲಿಯ ದ್ರುವ ತಾರೆಯಾಗಿ ಉಳಿದವರೆಂದರೆ ರಾಜಾ ರವಿ ವರ್ಮ ಮಾತ್ರ. ಈತ ಬೆಲೆ ಕಟ್ಟಲು ಸಾಧ್ಯವಾಗದಂತಹ ಕಲೆಗಳ ಜನ್ಮಧಾತ. ಇದು ಪುರಾತನ ದಾಖಲೆ ಆದರೆ ತನ್ನ ಅಪರೂಪದ, ವಿನೂತನ ಕಲೆಯ ಮೂಲಕ ಜಗತ್ತಿನ ಜನರ ಗಮನವನ್ನು ಸೆಳೆದ ಅದ್ಭುತ ಕಲೆಗಾರ ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ, ಅವರೇ ಕಲಿಯುಗದ ರವಿ ವರ್ಮ ಎಂದು ಖ್ಯಾತರಾದ ಪ್ರೋ. ಬಿ. ಕೆ. ಎಸ್ ವರ್ಮ.


ಬಿ. ಕೆ. ಎಸ್ ವರ್ಮ ಅವರು ಹುಟ್ಟಿದ್ದು 1949ರ ಸೆಪ್ಟೆಂಬರ್ 5 ರಂದು. ತಮ್ಮ ಆರನೇ ವಯಸ್ಸಿನಲ್ಲಿಯೇ ಬಣ್ಣದ ಮೇಲಿನ ವ್ಯಾಮೋಹವನ್ನು ಬೆಳೆಸಿಕೊಂಡ ಇವರು ಶಾಲೆಯ ಪಾಟಗಳಿಗಿಂತ ಹೆಚ್ಚಾಗಿ ಪಕ್ಕದಲ್ಲಿ ಕುಳಿತಿರುತ್ತಿದ್ದ ಸ್ನೇಹಿತನ ಬಿಳಿಯ ಬಟ್ಟೆಯ ಮೇಲೆ ಚಿತ್ರ ಬಿಡಿಸುತ್ತ ತನ್ನ ಬಾಲ್ಯವನ್ನು ಕಳೆದವರು. ಈ ಕಲೆಯ ಮೇಲಿನ ಅವರ ಪ್ರೀತಿಯು ಅವರ ತಂದೆ ಮತ್ತು ತಾಯಿಯ ಪ್ರೋತ್ಸಾಹದಿಂದಾಗಿ ಇನ್ನೂ ಹೆಮ್ಮರವಾಗಿ ಬೆಳೆಯಿತು. ಸ್ವತಹ ಕಲಾವಿದರಾದ ತಾಯಿ ಜಯಲಕ್ಷ್ಮಿಯವರು ಅವರಿಗೆ ಪ್ರೀತಿಯ ಮುತ್ತಿನ ಜೊತೆಗೆ ಕಲೆಯ ತುತ್ತನ್ನು ನೀಡಿ ಬೆಳೆಸಿದರು. ಇವರ ತಂದೆಯವರಿಗೆ ತನ್ನ ಮಗ ಒಬ್ಬ ಉತ್ತಮ ವೈದ್ಯನಾಗಬೇಕೆಂಬ ಹಂಬಲ ಭಲವಾಗಿತ್ತು ಅದರೆ ಮಗನ ಆಸಕ್ತಿಯನ್ನು ಕಂಡು ಅದನ್ನು ಪ್ರೋತ್ಸಾಹಿಸಿದರು.


ಇವರ ಜೀವನದಲ್ಲಿ ಕಲೆಗೆ ಸಂಬಂಧಿಸಿದಂತೆ ಗಾಡವಾದ ಪರಿಣಾಮವನ್ನು ಬೀರಿದವರೆಂದರೆ ಶ್ರೀ ಎ.ಸಿ ಆಚಾರ್ಯ ಮತ್ತು ಬಿ. ಎನ್ ಸುಬ್ಬಾರಾವ್ ಅವರು. ಮಹಾನ್ ವ್ಯಕ್ತಿಗಳಿಂದ ಪ್ರಭಾವಿತರಾದ ಇವರು ವಿಶಿಷ್ಟ ಪ್ರತಿಬೆಯನ್ನು ಹೊಂದಿದ್ದಾರೆ ಅಲ್ಲದೇ ಅವರ ಅನುಭವವೂ ವೈವಿಧ್ಯಮಯವಾಗಿದೆ. ಚಲನಚಿತ್ರ ರಂಗವನ್ನು ಸೇರುವುದಕ್ಕೂ ಮೊಟ್ಟ ಮೊದಲು ಇವರು "ಪ್ರಜಾಮತ" ಎಂಬ ನಿಯತಕಾಲಿಕೆಯಲ್ಲಿ ಸಿಬ್ಬಂಧಿ ಕಲಾವಿದರಾಗಿ ಕಾರ್ಯನಿರ್ವಹಿಸಿದರು. ಇವರು ತನ್ನ 15ನೇ ವಯಸ್ಸಿನಲ್ಲಿಯೇ "ಆದ್ಮಿ" (Aadmi) ಎಂಬ ಹಿಂದಿ ಚಲನಚಿತ್ರಕ್ಕೆ ಸಹಾಯಕ ಕಲಾ ನಿರ್ಧೇಶಕರಾಗಿದ್ದರು. ಇದಾದ ನಂತರ ಹಲವಾರು ಕನ್ನಡ ಚಲನಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.


60ರ ದಶಕವು ಅವರಿಗೆ ಹೆಚ್ಚಿನ ಯಶಸ್ಸು ಮತ್ತು ಹೆಸರನ್ನು ತಂದುಕೊಟ್ಟಿತು. ಈ ವರ್ಷಗಳಲ್ಲಿ ಹಲವಾರು ಪ್ರಮುಖ ಕಲಾವಿದರನ್ನು, ಮೇಧಾವಿಗಳನ್ನು ಸಂದರ್ಶಿಸಿ, ಅವರ ಚಿತ್ರವನ್ನು ತಮ್ಮ ಕುಂಚದ ಮೂಲಕ ಅರಳಿಸಿದ್ದಾರೆ. ದೇವೀಪ್ರಸಾದ್ ರಾಯ್ ಚೌದರಿ, ಶ್ರೀ ಜಯ ಚಾಮರಾಜೇಂದ್ರ ಒಡೆಯರ್, ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ಮತ್ತು ಎಸ್. ರಾಧಾಕೃಷ್ಣನ್ ಮುಂತಾದವರ ಚಿತ್ರಗಳನ್ನು ರಚಿಸಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನಗಳು 60ರ ದಶಕದಲ್ಲಿಯೇ ಆರಂಭವಾದರೂ 80ರ ದಶಕದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡರು. 1986-87ರಲ್ಲಿ ಈ ಏಕವ್ಯಕ್ತಿ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರು ಆಗ ಇದರ ಉಧ್ಘಾಟನಾ ಸಮಾರಂಬದಲ್ಲಿ ಡಾ. ರೋರಿಚ್ ಮತ್ತು ದೇವಿಕಾರಾಣಿಯವರು ಪಾಲ್ಗೊಂಡಿದ್ದರು.


ವರ್ಮ ಅವರ ಅಪೂರ್ವವಾದ ಥ್ರೆಡ್-ಆರ್ಟ್ (Thread Art-ದಾರದ ಮೂಲಕ ರಚಿಸುವ ಚಿತ್ರ) ಮತ್ತು ನೇಲ್-ಆರ್ಟ್ (Nail Art-ಉಗುರಿನ ಮೂಲಕ ರಚಿಸುವ ಚಿತ್ರ) ಆದ ಕಾವ್ಯ-ಚಿತ್ರ ಮತ್ತು ಗೀತ-ನೃತ್ಯ ಬಹು ಜನಪ್ರಿಯವಾಯಿತು ಮತ್ತು ಜಗತ್ತಿನಾದ್ಯಂತ ಪ್ರದರ್ಶನ ಕಂಡಿತು. 1997ರಲ್ಲಿ ಸತಾವಧಾನಿ ಆರ್. ಗಣೇಶ್ ಅವರ ಜೊತೆಗೂಡಿ ನಿರಂತರ 24 ಘಂಟೆಗಳ ಕಾವ್ಯ-ಚಿತ್ರವನ್ನು ರಚಿಸಿ ದಾಖಲೆಯನ್ನು ನಿರ್ಮಿಸಿದರು. ಇವರು ಇಂದಿಗೂ ತಮ್ಮ ಈ ಕಲೆಯಿಂದ ಜನರನ್ನ ಆಕರ್ಷಿಸುತ್ತ ಸಾಧನೆಯ ಪಥದಲ್ಲಿ ಮುಂದುವರಿಯುತ್ತಿದ್ದಾರೆ. ಮನುಕುಲಕ್ಕೆ ವಿನೂತನ ಕೊಡುಗೆಯನ್ನು ನೀಡಿದ ಅವರಿಗೆ ಶುಭ ಹಾರೈಸೋಣ.