ಬೇಡವೆಂದರೂ ಬಿಡದೀ ಮಾಯೆ
ಕಣ್ಣೊಳಗಣ ಕಸದಂತೆ ಇರಿಯುತಿದೆ
ಗಾಡಾಂಧಕಾರದಲಿ ಬೆಳಕೆಂಬ ಮಾಯೆ
ಸುಖ ನಿದ್ರೆಯಲಿ ಕನಸೆಂಬ ಮಾಯೆ.
ತನುವೊಳಗೆ ಬಿಸಿಯೇರಿಸಿ
ಚಳಿ, ಮಳೆಯೊಳು ತೇಲಿಸುವುದೀ ಮಾಯೆ
ಪ್ರೇಮದರಸಿಯ ಕಾಮದಾಸೆಗೆ ತಬ್ಬಲು
ಮುಳ್ಳಂದದಿ ಚುಚ್ಚುವುದೀ ಮಾಯೆ.
ಪ್ರೇಮ ಕುಸುಮದ ಸುಮದ ಮತ್ತಿಗೆ
ಚೇಳು ಕಡಿಸುವುದೀ ಮಾಯೆ
ಚುಂಬಿಸುವ ಕೆಂದುಟಿಗಳ ಮಧುವೊಳಗೆ
ವಿಷವ ಬೆರೆಸುವುದೀ ಮಾಯೆ.
ನಿನ್ನನೇ ನಂಬಿ ತನು ಮನವನಪಿ೯ಸಿ
ನೀ ಬರುವ ದಾರಿಯಲಿ ಹೂವಾಗಿ ಬಿದ್ದಿರಲು
ತುಳಿ, ತುಳಿದು ಭೂಗಭ೯ಕಂಟಿಸುತ
ಮರಣದುಂದುಬಿಯ ನುಡಿಸುವುದೀ ಮಾಯೆ.
2 comments:
ಅದುವೇ ಪ್ರೀತಿ ಎಂಬುವ ಮಾಯೆ
ನಿಮ್ಮ ಮನಸಿನ ಮಾತು ನನ್ನ ಮನಸಿಗೆ ಮಾಡಿತು ತುಂಬಲಾರದ ತೂತು ,,,,,,,,, ಹಾ ಹಾ ಹಾ ಹಾ
Post a Comment