Pages

Subscribe:

Ads 468x60px

Thursday, February 26, 2009

ಬಂಧ ಮುಕ್ತೆ



ಮತ್ತೆ ನಿನಗೆ ನಾ ತೊಂದರೆ ಕೊಡುವುದಿಲ್ಲ,
ಜೀವಿಸಿಕೊ ನಿನ್ನ ಜೀವನ.
ಹಾರ ಬಯಸಿದ್ದೆಯಲ್ಲ ದಿವ್ಯ ದಿಗಂತದೆಡೆಗೆ,
ರೆಕ್ಕೆ ಬಿಚ್ಚಿ ಹಾರು, ಮತ್ತೆ ಪಂಜರದಲ್ಲಿ
ಬಂಧಿಸುವ ಕಾಯ೯ ನಾನೆಂದೂ ಮಾಡುವುದಿಲ್ಲ.

ನಿನಗಿನ್ನು ನನ್ನ ನೋಡಿ ಹೆದರುವ ಅಗತ್ಯವಿಲ್ಲ.
ನೀನು ಬಂಧ ಮುಕ್ತೆ. ನನ್ನ ಎದೆಗೂಡಿನಿಂದ,
ನನ್ನ ನೆನಪುಗಳಿಂದ, ನನ್ನ ಕನಸುಗಳಿಂದ.
ಆ ದಿನಮಣಿಯ ಕಿರಣ ನೀ ಹಾರುವ ದಿಕ್ಕ
ಬೇಳಗುತಿಹುದು, ಹೊರಡು ಬೇಗ.

ನಿನ್ನ ಜೀವನ ನಂದಾ ದೀಪವಾಗಲೆಂದೇ
ನನ್ನೆದೆಯ ಉಸಿರ ಸುರಿಯುತಿಹೆ
ಹಣತೆಯಲ್ಲಿ, ಬಸಿದುಕೊ ಸಾಧ್ಯವಾದಷ್ಟು.
ಆದಷ್ಟು ಬೇಗ ಬರಿದಾಗಿಸು.
ಆಗಲೇ ನಾ ನಿನ್ನ ನೆನಪುಗಳಿಂದ ಮುಕ್ತ.

ಇದುವರೆಗಿನೆಲ್ಲ ಕನಸುಗಳ ಹೂಮಾಲೆಯಾಗಿಸಿ
ನಿನ್ನ ಪಾದದಡಿಯಿಡುವೆ, ನಿನ್ನ ಹಾರುವ
ಕಾಲುಗಳಿಗದೇ ಚೈತನ್ಯವಂತೆ, ಒಮ್ಮೆ ತುಳಿದು
ಹಾಗೆಯೇ ನೆಗೆದುಬಿಡು ನಭ ನೀಲಿಯೆಡೆಗೆ.

ಮತ್ತೆ ನನ್ನ ಕಣ್ಣ ನೋಡಬೇಡ, ಕಳೆದುಕೊಂಡಿದ್ದೇನೆ
ಅವುಗಳಲ್ಲಿ ಅಶ್ರುಧಾರೆ ಹರಿದೀತೆಂದು.
ಮತ್ತೆ ಮಿಡುಕಬೇಡ, ಕೈ ಚಾಚಬೇಡ, ಮಣ್ಣಲ್ಲಿ
ಮಣ್ಣಾಗಿ ಹೋಗುವ ಮುನ್ನ ಹಾರಿಬಿಡು,
ಪ್ರಾಣ ಪಕ್ಷಿ ಹಾರಿ ಹೋದಂತೆ.

ಮತ್ತೆ ನಾ ನಿನಗೆ ತೊಂದರೆ ಕೊಡುವುದಿಲ್ಲ.

8 comments:

Unknown said...

very nice........ heart touching poem anna

ಕೃಷ್ಣ कृष्ण Krishna said...

Nice one... I liked it a lot... Keep it up

Guru Moger said...
This comment has been removed by the author.
ಮನಸಿನ ಮಾತು said...

thanks krish....

anu said...

ಆಗಲೇ ನಾ ನಿನ್ನ ನೆನಪುಗಳಿಂದ ಮುಕ್ತ.
ee saalu chennagide... & kavana kuda.....

Radha said...
This comment has been removed by the author.
Radha said...

"ಬಂಧ ಮುಕ್ತೆ" ಈ ಶೀಷಿ್ಕೆ ನೋಡಿದಾಗ ನನ್ನಗೆ ಈ ಸಾಲುಗಳು ನೆನಪಾಗುತ್ತೆ. ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ, ದೇವ ಅರಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ,ಮುಕ್ತ, ಇರುಳಲ್ಲಿ ಯುದ್ಧ, ಬೆಳಕಿನ ಯುದ್ಧ, ಕೊನೆಯಿಲ್ಲದ ಕಾದಾಟ, ತಡೆಯಿಲ್ಲದೆ ನಡೆಯಲೇಬೇಕು ಸೋಲಿಲ್ಲದ ಹೋರಾಟ, ನಿಮ್ಮ ಕವನಕ್ಕೂ ಇದಕ್ಕೂ ತುಂಬಾನೇ ಹೋಲಿಕೆ ಇದೆ. ಕವನ ಓದುತ್ತಾ ಹೋದಾಗ ನಮ್ಮ ಜೀವನಕ್ಕೆ ತುಂಬಾ ಹತ್ತಿರವಿದೆ ಅನಿಸುತ್ತೆ. ಅದರಲ್ಲೂ ಕೊನೆ ಸಾಲು,ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ ಹಾರಿಬಿಡು, ಪ್ರಾಣಪಕ್ಷಿ ಹಾರಿ ಹೋದಂತೆ.ಇದು ತುಂಬಾನೇ ಚೆನ್ನಾಗಿದೆ.

parameshwara kn said...

ಮಗುವಾಗಿ ಸುಮ್ಮನೆ ನಿನ್ನ ಮಡಿಲಲ್ಲಿ ಮಲಗುವ ಮುನ್ನ ಬೆಚ್ಚನೆ ಎದೆಯಲ್ಲಿ ನಾ ಬಚ್ಚಿ ಕೂರುವಾಸೆ entntaha kalpane nimma barahagalu hosadondu lokakke kondoyyuttave neevu needid mahiti nanage upayukta